
ದಿನಾಂಕ: ೧-೧೨-೨೦೨೧
ಪ್ರಕಟಣೆಗಾಗಿ
ಧಾರವಾಡ : ಸಿದ್ದಲಿಂಗ ದೇಸಾಯಿ ಅವರು ಧಾರವಾಡಕ್ಕೆ ಮೆರಗು ತಂದು ಕೊಟ್ಟವರು. ಹಳ್ಳಿಯ ಭಾವನೆಗಳನ್ನು ಅರಿತುಕೊಂಡು ಕವಿತೆಗಳ,ನಾಟಕಗಳ ಮೂಲಕ ಜನಸಾಮಾನ್ಯರ ಸಾಹಿತಿ ಎನಿಸಿಕೊಂಡವರು. ಅವರ ನಾಟಕಗಳು ಗ್ರಾಮೀಣ ಭಾಷೆಯ ಸೊಗಡನ್ನು ಬಿಂಬಿಸುತ್ತಲೇ ಅವರ ನಾಟಕಗಳು ಬಂಡಾಯವನ್ನು ಈಗಲೂ ಧ್ವನಿಸುತ್ತಿದ್ದಾವೆ. ಕೆಲವೇ ನಾಟಕ ಬರೆದಿದ್ದರೂ ಅವು ರಾಷ್ಟ್ರ ಮಟ್ಟದಲ್ಲಿ ಹೆಸರು ಮಾಡಿದವು. ಅವರ ಮಾತು ಮತ್ತು ನಡೆ ಗ್ರಾಮಿಣ ಸಂಸ್ಕೃತಿಯನ್ನೇ ಪ್ರತಿಬಿಂಬಿಸುತ್ತಿದ್ದವು ಎಂದು ನಿವೃತ್ತ ವಯಸ್ಕರ ಶಿಕ್ಷಣಾಧಿಕಾರಿ ಸೋಮಲಿಂಗ ಉಳ್ಳಿಗೇರಿ ಹೇಳಿದರು.
ಅವರು ಕರ್ನಾಟಕ ವಿದ್ಯಾವರ್ಧಕ ಸಂಘವು, ದಿ. ಶ್ರೀ ಸಿದ್ಧಲಿಂಗ ದೇಸಾಯಿ ದತ್ತಿ ಅಂಗವಾಗಿ ಆಯೋಜಿಸಿದ್ದ ಅಭಿಷೇಕ ಸಿದ್ಧಲಿಂಗ ದೇಸಾಯಿ ಬಳಗದಿಂದ ಶ್ರೀ ಅಭಿಷೇಕ ಸಿದ್ಧಲಿಂಗ ದೇಸಾಯಿ ನಿರ್ದೇಶನದ ‘ಎಲೆಕ್ಷನ್ ಗಿ/s ಕಲೆಕ್ಷನ್’ ಮೊದಲ ಸರಣಿ ಸಂಚಿಕೆ ಪ್ರದರ್ಶನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.
ಇನ್ನೋರ್ವ ಮುಖ್ಯ ಅತಿಥಿ, ಪ್ರಗತಿಪರ ಕೃಷಿಕ, ಚಿಂತಕ ರಾಜೇಂದ್ರ ಸಾವಳಗಿ ಮಾತನಾಡಿ, ಸಿದ್ದಲಿಂಗ ದೇಸಾಯಿಯವರು ಇಂಗ್ಲೀಷ ಭಾಷೆಯ ಮೇಲೆ ಹಿಡಿತ ಹೊಂದಿದ್ದರು. ನಾಡಿನ ಶ್ರೇಷ್ಠ ಸಾಹಿತಿಗಳ ಮತ್ತು ರಾಜಕಾರಣಿಗಳ ಹಾಗೂ ಜನಸಾಮಾನ್ಯರೊಂದಿಗೆ ನಿಕಟ ಸಂಪರ್ಕ ಮತ್ತು ಒಡನಾಟ ಹೊಂದಿ ಸಾಹಿತಿ ರಾಜಕಾರಣಿ ನಡುವೆ ಕೊಂಡಿಯಾಗಿ ನಿಂತು ರಾಜಕಾರಣಿಗಳಲ್ಲಿ ಸಾಹಿತ್ಯದ ಅಭಿರುಚಿ ಹೆಚ್ಚಿಸಿದ್ದರು. ಅವರು ಕನ್ನಡ ಭಾಷೆಯ ಬಳಕೆಯಲ್ಲಿ, ವಿಶೇಷ ಪ್ರಯೋಗವನ್ನು ಸಾಹಿತ್ಯದಲ್ಲಿ ಮಾಡಿದವರು. ಇಂದು ಇಂಗ್ಲೀಷ ಪದಗಳನ್ನು ಹೆಚ್ಚು ಬಳಸುತ್ತಿದ್ದೇವೆ. ಹಿಂದೆ ಇಂಗ್ಲೀಷ ಪದಗಳ ಬಗ್ಗೆ ಅರ್ಥಕ್ಕೆ ಹುಡುಕಾಡಿದಂತೆ ಮುಂದೆ ಕನ್ನಡದ ಭಾಷೆಯ ಬಗ್ಗೆ ಡಿಕ್ಷನರಿ ಹುಡುಕುವಂತ ಪರಿಸ್ಥಿತಿ ಬರದಂತೆ ನೋಡಿಕೊಳ್ಳಬೇಕಿದೆ ಎಂದರು.
ಮತ್ತೋರ್ವ ಮುಖ್ಯ ಅತಿಥಿ, ಉಡಾಳ್ ಮೆಂಬರ ಖ್ಯಾತಿಯ ನಟ, ನಿರ್ದೇಶಕ ಜಗದೀಶ ಮೂಕಿ ಮಾತನಾಡಿ, ಒಬ್ಬ ಸಾಮಾನ್ಯ ವ್ಯಕ್ತಿಗೆ ಅವಕಾಶ ಸಿಕ್ಕರೆ ಏನೆಲ್ಲಾ ಸಾಧಿಸಬಹುದು. ಉತ್ತರ ಕರ್ನಾಟಕದಲ್ಲಿ ಸಾಕಷ್ಟು ಪ್ರತಿಭೆಗಳು ಇವೆ. ಅವರಿಗೆ ಸರಿಯಾದ ಅವಕಾಶಗಳು, ವೇದಿಕೆ ಸಿಗಬೇಕಿದೆ. ಉತ್ತರ ಕರ್ನಾಟಕದ ಕಲಾವಿದರು ಬೆಂಗಳೂರತ್ತ ಮುಖ ಮಾಡದೇ ನಮಗೆ ನಾವೇ ವ್ಯವಸ್ಥೆಯನ್ನು ರೂಪಿಸಿಕೊಂಡು ಬೆಳೆಯಬೇಕಿದೆ ಎಂದರು
ಮುಖ್ಯ ಅತಿಥಿಯಾಗಿ ರಂಗಭೂಮಿ ಕಲಾವಿದ, ಚಿತ್ರನಟ ಚನ್ನಬಸಪ್ಪ ಕಾಳೆ ಮಾತನಾಡಿ, ಸಿದ್ದಲಿಂಗ ದೇಸಾಯಿಯವರ ನಾಟಕದಲ್ಲಿ ನಾನು ಭಾಗವಹಿಸಿದ್ದು ಅವಿಸ್ಮರಣೀಯ. ಅವರು ನಾಟಕದ ಸಂಭಾಷಣೆಯಲ್ಲಿ ಬಳಸಿದ ಪದಗಳು ಜನಸಾಮಾನ್ಯರ ಹೃದಯಕ್ಕೆ ನೇರವಾಗಿ ಲಗ್ಗೆ ಇಡುತ್ತಿದ್ದವು. ಸಿದ್ಧಲಿಂಗ ದೇಸಾಯಿಯವರ ನಾಟಕಗಳಂತೆ ಇದುವರೆಗೆ ಮತ್ತೆ ಈ ನೆಲದಲ್ಲಿ ಮೂಡಿಬಂದಿಲ್ಲ ಎಂದರು.
ಯುವ ನಾಯಕ ಅರವಿಂದ ಏಗನಗೌಡರ, ಕಲಾವಿದನಿಗೆ ಹೇರಳವಾಗಿ ಅವಕಾಶಗಳು ದೊರಕಿದಾಗಲೇ ಕಲಾವಿದನಲ್ಲಿಯ ನಿಜವಾದ ಪ್ರತಿಭೆ ಹೊರಹೊಮ್ಮಲು ಸಾಧ್ಯ. ಸಿದ್ಧಲಿಂಗ ದೇಸಾಯಿಯವರ ಸಾಹಿತ್ಯದಷ್ಟೇ ಪ್ರೌಢತೆ ಅವರ ಪುತ್ರ ಅಭಿಷೇಕ ದೇಸಾಯಿಯ ಸಾಹಿತ್ಯದಲ್ಲಿ ಕಾಣುತ್ತೇವೆ. ಇಂದು ಚುನಾವಣೆಯ ಅವ್ಯವಸ್ಥೆಯನ್ನು ಇಲೆಕ್ಷನ್ ವರ್ಸಸ್ ಕಲೆಕ್ಷನ್ ಕಿರು ಚಿತ್ರದಲ್ಲಿ ಕಣ್ಣಿಗೆ ಕಾಣುವಂತೆ ಕಟ್ಟಿಕೊಟ್ಟಿದ್ದಾರೆ ಎಂದರು.
ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದ ಸಿಂಡಿಕೆಟ್ ಸದಸ್ಯ ಶ್ರೀನಿವಾಸ ಶಾಸ್ತ್ರಿ ಮಾತಾಡಿ, ಧಾರವಾಡದಲ್ಲಿ ಫಿಲ್ಮಸಿಟಿ ನಿರ್ಮಾಣ ಆಗುವಂತೆ ಕರ್ನಾಟಕ ವಿದ್ಯಾವರ್ಧಕ ಸಂಘದ ಅಧ್ಯಕ್ಷರು ಪ್ರಯತ್ನ ಮಾಡಬೇಕು. ಇಂಡಸ್ಟಿçಯಕ್ಕು ೧೬೦ ಎಕರೆಗಿಂತ ಹೆಚ್ಚು ಭೂಮಿ ಉಪಯೋಗಿಸದೇ ಹಾಗೇ ಇದೆ. ಉತ್ತರ ಕರ್ನಾಟಕದ ಸಿನೆಮಾ ಚಟುವಟಿಕೆಗಳ ಕೇಂದ್ರವಾಗಿ ಮಾಡುವ ಮೂಲಕ ಸಾಂಸ್ಕೃತಿಕ ನಗರಿಗೆ ಇನ್ನಷ್ಟು ಹಿರಿಮೆ ತರುವಂತೆ ಆಗಬೇಕು. ಸಂಘವು ಯುವ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡಬೇಕು ಎಂದರು.
ಸಂಘದ ಅಧ್ಯಕ್ಷರಾದ ಚಂದ್ರಕಾAತ ಬೆಲ್ಲದ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಿದ್ದಲಿಂಗ ದೇಸಾಯಿ ಗೋಕಾಕ ಚಳುವಳಯಲ್ಲಿ ಸಕ್ರೀಯವಾಗಿ ಭಾಗವಹಿಸಿದ್ದನ್ನು ಯಾರೂ ಮರೆಯುವಂತಿಲ್ಲ. ಅವರು ಸಂಘದ ಪದಾಧಿಕಾರಿಯಾಗಿ ಕಾರ್ಯಮಾಡಿದ್ದಲ್ಲದೇ ಕ್ರೀಯಾಶೀಲ ಯುವಕರನ್ನು ಕಟ್ಟಿಕೊಂಡು ಕನ್ನಡ ಪರ ಕೆಲಸಗಳನ್ನು ಮಾಡುತ್ತಿದ್ದುದು ಇಂದಿನ ಯುವಕರಿಗೆ ಅವರು ಮಾದರಿ ಆಗಿದ್ದಾರೆ. ಅಂಥ ಸಾಹಿತಿಯ ಮಗ ಅಭಿಷೇಕ ದೇಸಾಯಿ ಕಿರುಚಿತ್ರಗಳನ್ನು ಮಾಡುವ ಮೂಲಕ ಒಬ್ಬ ಶ್ರೇಷ್ಠ ಸಾಹಿತಿ ಮತ್ತು ಕಿರು ಚಿತ್ರಗಳ ನಿರ್ದೇಶಕನೆಂದು ಗುರುತಿಸಿಕೊಂಡಿದ್ದು ಹೆಮ್ಮೆಯ ಸಂಗತಿ. ಇಂಥ ಕಲಾವಿದರ ಬೆಳವಣಿಗೆಗೆ ಸಂಘ ಸದಾ ಬೆನ್ನಿಗೆ ನಿಲ್ಲುತ್ತದೆ ಎಂದರು.
ನAತರ ಸಂಘಕ್ಕೆ ಹೊಸದಾಗಿ ಆಯ್ಕೆಯಾದ ಪದಾಧಿಕಾರಿಗಳನ್ನು ದತ್ತಿದಾನಿಗಳಾದ ಅಭಿಷೇಕ ದೇಸಾಯಿ ಸನ್ಮಾನಿಸಿ ಗೌರವಿಸಿದರು. ನಂತರ ‘ಎಲೆಕ್ಷನ್ ಗಿ/s ಕಲೆಕ್ಷನ್’ ಮೊದಲ ಸರಣಿ ಸಂಚಿಕೆ ಸಂಪೂರ್ಣ ಪ್ರದರ್ಶನಗೊಂಡಿತು.
ಪ್ರಾರAಭದಲ್ಲಿ ದಿ. ಶ್ರೀ ಸಿದ್ಧಲಿಂಗ ದೇಸಾಯಿಯವರ ಭಾವಚಿತ್ರಕ್ಕೆ ಪುಷ್ಪನಮನದೊಂದಿಗೆ ಗೌರವ ಸಲ್ಲಿಸಲಾಯಿತು. ವೇದಿಕೆಯಲ್ಲಿ ಶ್ರೀಕಾಂತ ಕ್ಯಾತಪ್ಪನವರ ಇದ್ದರು.
ಆರಂಭದಲ್ಲಿ ಮಕ್ಕಳಿಂದ ಪ್ರಾರ್ಥನೆ ಜರುಗಿತು. ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ ಸ್ವಾಗತಿಸಿ, ಪ್ರಾಸ್ತಾವಿಕ ನುಡಿಗಳನ್ನಾಡಿದರು. ದತ್ತಿದಾನಿಗಳ ಪರವಾಗಿ ಅಭಿಷೇಕ ಸಿದ್ಧಲಿಂಗ ದೇಸಾಯಿ ಮಾತನಾಡಿದರು. ಕೋಶಾಧ್ಯಕ್ಷ ಶಿವಾನಂದ ಭಾವಿಕಟ್ಟಿ ನಿರೂಪಿಸಿದರು. ಸಹ ಕಾರ್ಯದರ್ಶಿ ಶಂಕರ ಕುಂಬಿ ವಂದಿಸಿದರು.
ಕಾರ್ಯಕ್ರಮದಲ್ಲಿ ಸಂಘದ ಕಾರ್ಯಾಧ್ಯಕ್ಷ ಬಸವಪ್ರಭು ಹೊಸಕೇರಿ, ಕಾರ್ಯಕಾರಿ ಸಮಿತಿ ಸದಸ್ಯರಾದ ಡಾ. ಶೈಲಜಾ ಅಮರಶೆಟ್ಟಿ, ವೀರಣ್ಣ ಒಡ್ಡೀನ, ಗುರು ಹಿರೇಮಠ, ಡಾ. ಮಹೇಶ ಹೊರಕೇರಿ, ಡಾ. ಜಿನದತ್ತ ಹಡಗಲಿ. ಡಾ. ಧನವಂತ ಹಾಜವಗೋಳ ಹಾಗೂ ಸಿ.ಎಸ್ ಪಾಟೀಲ. ಪ್ರಭು ಹಂಚಿನಾಳ, ಲಿಂಗರಾಜ ಪಾಟೀಲ, ಎಸ್.ಎಂ. ದಾನಪ್ಪಗೌಡರ, ಸತೀಶ ತುರಮರಿ, ಯಕ್ಕೇರಪ್ಪ ನಡುವಿನಮನಿ, ಫಕ್ಕಿರಪ್ಪ ಮುರಕಟ್ಟಿ, ಸದಾಶಿವ ಜನಗೌಡರ, ಮುದಿಗೌಡರ, ಎಚ್.ಡಿ. ನದಾಫ್, ಪ್ರಭು ಕುಂದರಗಿ, ಮಹಾಂತೇಶ ನರೇಗಲ್, ಶಿ.ಮ. ರಾಚಯ್ಯನವರ, ಕರೆಪ್ಪ ಸುಣಗಾರ ಸೇರಿದಂತೆ ಸಿದ್ಧಲಿಂಗ ಪಟ್ಟಣಶೆಟ್ಟಿ ಪರಿವಾದವರು, ಅಭಿಮಾನಿಗಳು ಭಾಗವಹಿಸಿದ್ದರು.
ಶಂಕರ ಹಲಗತ್ತಿ
ಪ್ರಧಾನ ಕಾರ್ಯದರ್ಶಿ