(೦೮೩೬) ೨೪೪೦೨೮೩, ೨೪೩೬೧೭೬ kvvsangha@gmail.com
Select Page

ದಿನಾಂಕ: ೩-೧-೨೦೨೨
ಪ್ರಕಟಣೆಗಾಗಿ

ಧಾರವಾಡ : ಶಂಬಾ ಅವರು ಕನ್ನಡದ ನೆಲ, ಜಲ, ಸಂಸ್ಕೃತಿ ಬಗ್ಗೆ ಆಳವಾಗಿ ಅಧ್ಯಯನ ಮಾಡಿ, ವಿದ್ವತ್ ಹೊಂದಿದ್ದ ಶ್ರೇಷ್ಠ ಕನ್ನಡ ಸಂಶೋಧಕರಾಗಿದ್ದರು ಎಂದು ಉಪನ್ಯಾಸಕರಾಗಿ ಆಗಮಿಸಿದ್ದ ಸಾಹಿತಿ ಡಾ. ಹ. ವೆಂ. ಕಾಖಂಡಕಿ ಹೇಳಿದರು. ಕರ್ನಾಟಕ ವಿದ್ಯಾವರ್ಧಕ ಸಂಘವು, ದಿ. ಡಾ. ಶಂಬಾ ಜೋಶಿ ದತ್ತಿ ಅಂಗವಾಗಿ `ಕನ್ನಡ ಭಾಷಾ ಸಂಶೋಧನಾ ದಿನ’ ಆಚರಣೆಯ ಪ್ರಯುಕ್ತ ಆಯೋಜಿಸಿದ್ದ `ಶಂಬಾ ಅವರ ಜೀವನ ಮತ್ತು ಸಾಧನೆ’ ವಿಷಯದ ಮೇಲೆ ಉಪನ್ಯಾಸ ನೀಡುತ್ತಾ ಮಾತನಾಡುತ್ತಿದ್ದರು.
ಮುಂದುವರೆದು ಮಾತನಾಡಿದ ಅವರು, ಶಂಬಾ ಕನ್ನಡ-ಇಂಗ್ಲೀಷ-ಸAಸ್ಕೃತ-ಮರಾಠಿ ಭಾಷೆಗಳ ಮೇಲೆ ಪ್ರಭುತ್ವ ಹೊಂದಿದವರಾಗಿದ್ದರು. ಮತ್ತು ಅವುಗಳ ಮೇಲೆ ಅರಿವು ಮತ್ತು ಹರವು ಹೊಂದಿದ ಅವರು ನೂತನ ಆಯಾಮಗಳೊಂದಿಗೆ ಕನ್ನಡದ ಸಂಶೋಧನೆ ಕಾರ್ಯ ಮಾಡಿದ ಶ್ರೇಷ್ಠ ಸಾಹಿತಿ ಎಂದರು.
ಅಧ್ಯಕ್ಷತೆ ವಹಿಸಿದ್ದ ನಿವೃತ್ತ ಉಪನ್ಯಾಸಕ ಪ್ರೊ. ಹರ್ಷ ಡಂಬಳ ಮಾತನಾಡಿ, ಶಂಬಾ ಅವರೊಬ್ಬ ಮೇರು ವ್ಯಕ್ತಿತ್ವದ ಸಂಶೋಧಕರಾಗಿ ಕಾರ್ಯ ಮಾಡಿದವರು. ಸಂಶೋಧನೆ ಅವರ ಉಸಿರಾಗಿತ್ತು, ಕನ್ನಡದ ನೆಲೆ ಕಾವೇರಿಯಿಂದ-ಗೋದಾವರಿವರೆಗೆ ಇರುವುದನ್ನು ತಮ್ಮ ಸಂಶೋಧನೆಯ ಮೂಲಕ ಅಂತಿಮ ಘಟ್ಟ ತಲುಪುವವರೆಗೂ ಮಾಡಿದ ಕೀರ್ತಿ ಇವರಿಗೆ ಸಲ್ಲುತ್ತದೆ. ಅವರ `ದಾರಿಗೆ ಬುತ್ತಿ’ ಕೃತಿ ಜೀವನ ಮಾರ್ಗವನ್ನೇ ಕಟ್ಟಿಕೊಟ್ಟಿದೆ. ತಮ್ಮ ಬದುಕಿನ ಬಹುಭಾಗವನ್ನು ಬರವಣಿಗೆಗೆ ಮೀಸಲಿಟ್ಟಿದ್ದರು. ಇವರೊಬ್ಬ ಕನ್ನಡದ ಸತ್ಯ ಸಂಶೋಧಕರಾಗಿದ್ದವರು. ತಮ್ಮ ಕನ್ನಡ ಸಾಹಿತ್ಯ ಕಾರ್ಯದ ಜೊತೆಗೆ ಕರ್ನಾಟಕ ವಿದ್ಯಾವರ್ಧಕ ಸಂಘದ ಸಹಕಾರ್ಯದರ್ಶಿಯಾಗಿಯೂ ಅನುಪಮ ಕಾರ್ಯ ಮಾಡಿದ್ದರ ಕುರಿತು ಪ್ರೊ. ಡಂಬಳ ಮೆಲಕು ಹಾಕಿದರು.
ಮಾನವ ಪ್ರತಿಷ್ಠಾನದ ಕಾರ್ಯದರ್ಶಿ ವ್ಹಿ. ಜಿ. ಭಟ್ ಮಾತನಾಡಿ, ನಮ್ಮ ಪ್ರಜ್ಞೆ ಅದು ನಮ್ಮಲ್ಲಿಯೇ ಉದ್ಭವವಾಗಬೇಕು. ಶಂಬಾ ಅವರ ಜ್ಞಾನ, ವಿಚಾರ, ಬದುಕು, ಬರಹ, ಸಾಹಿತ್ಯದ ಕುರಿತು ಸಮಾಜಕ್ಕೆ ಬೆಳಕು ಚೆಲ್ಲುವ ಪ್ರತಿಷ್ಠಾನದ ಉದ್ದೇಶವನ್ನು ಶಂಬಾ ಅವರ ದತ್ತಿ ಮೂಲಕ ಕರ್ನಾಟಕ ವಿದ್ಯಾವರ್ಧಕ ಸಂಘ ಅರ್ಥಪೂರ್ಣವಾಗಿ ಮಾಡುತ್ತಿದೆ ಎಂದರು.
ಶಂಕರ ಕುಂಬಿ ಸ್ವಾಗತಿಸಿದರು. ಗುರು ಹಿರೇಮಠ ನಿರೂಪಿಸಿದರು. ಡಾ. ಧನವಂತ ಹಾಜವಗೋಳ ವಂದಿಸಿದರು.
ಕಾರ್ಯಕ್ರಮದಲ್ಲಿ ಶಂಕರ ಹಲಗತ್ತಿ, ಬಸವಪ್ರಭು ಹೊಸಕೇರಿ, ಶಿವಾನಂದ ಭಾವಿಕಟ್ಟಿ, ವೀರಣ್ಣ ಒಡ್ಡೀನ, ರಾಜೇಂದ್ರ ಸಾವಳಗಿ, ಪ್ರೊ. ರಮಾಕಾಂತ ಜೋಶಿ, ಮನೋಜ ಪಾಟೀಲ, ಎಂ. ಎಂ. ಚಿಕ್ಕಮಠ, ಲಕ್ಷಿö್ಮಕಾಂತ ಬೀಳಗಿ, ರುದ್ರಣ್ಣ ಚಿಲುಮಿ, ರಾಮಚಂದ್ರ ಧೋಂಗಡೆ, ನಾಡಿಗೇರ, ಉಲ್ಲಾಸ ರಾಯಭಾಗಕರ, ಚನ್ನಬಸಪ್ಪ ಅವರಾದಿ ಮುಂತಾದವರು ಭಾಗವಹಿಸಿದ್ದರು.
ಶಂಕರ ಹಲಗತ್ತಿ
ಪ್ರಧಾನ ಕಾರ್ಯದರ್ಶಿ
ಮೊ: ೯೪೪೮೦೨೨೯೫೦